Ticker

6/recent/ticker-posts

Header Ads Widget

ಲಾಡ್ಜ್​ವೊಂದರ ಬಾತ್​ರೂಮ್​ನಲ್ಲಿದ್ದ ಸಣ್ಣ ಕನ್ನಡಿ ತೆಗೆದ ಪೊಲೀಸರಿಗೆ ಕಾದಿತ್ತು ಶಾಕ್​!


ಕೊಯಮತ್ತೂರು:  ಹೋಟೆಲ್ ಲಾಡ್ಜ್ ಒಂದರ ಬಾತ್ ರೂಮ್ ನಲ್ಲಿ ಇದ್ದ ಒಂದು ಸಣ್ಣ ಕನ್ನಡಿ ಪೊಲೀಸರಲ್ಲಿ ಅನುಮಾನವನ್ನು ಮೂಡಿಸಿತ್ತು. ತಮಿಳುನಾಡಿನ ಕೊಯಮತ್ತೂರು ಪೊಲೀಸರು ಲಾಡ್ಜ್ ಒಂದರ ಮೇಲೆ ದಾಳಿ ನಡೆಸಿದಾಗ ದಾಳಿಯವೇಳೆ ಬಾತ್ ರೂಮಿನಲ್ಲಿದ್ದ ಕನ್ನಡಿಯನ್ನು ನೋಡಿದಾಗ ಅವರಿಗೊಂದು ಅಚ್ಚರಿ ಕಾದಿತ್ತು.


ಕನ್ನಡಿಯ ಹಿಂದುಗಡೆ ಒಂದು ಸಣ್ಣ ಕೋಣೆ ಇದ್ದುದನ್ನು ಪೊಲೀಸರು ನೋಡಿದ್ದಾರೆ. ಆ ಕೋಣೆಯಲ್ಲಿ 22 ವರ್ಷದ ಯುವತಿಯನ್ನು ಬಂಧಿಸಿಡಲಾಗಿತ್ತು. ಯುವತಿಯು ಬೆಂಗಳೂರು ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ. ನಂತರ ಆ ಯುವತಿಯನ್ನು ಅಲ್ಲಿಂದ ಸರ್ಕಾರಿ ಮಹಿಳಾ ನಿವಾಸಕ್ಕೆ ಕಳುಹಿಸಿಕೊಡಲಾಗಿದೆ. ಆ ಯುವತಿ ಜೊತೆ ಇನ್ನು ಇಬ್ಬರು ಇದ್ದು ಅವರನ್ನು ಆರೋಪಿಗಳೆಂದು ಪರಿಗಣಿಸಿ ಬಂಧಿಸಲಾಗಿದೆ.



ಖಚಿತ ಮಾಹಿತಿ ಮೇರೆಗೆ ಬುಧವಾರ ಮೇಟುಪಾಳ್ಯಂ ಉಪವಲಯದಲ್ಲಿ ಬರುವ ಕಲ್ಲಾರ್​ ಬಳಿಯ ಊಟಿ ರಸ್ತೆ ಬದಿಯಲ್ಲಿ ಇರುವ ಸರಣ್ಯ ಲಾಡ್ಜ್​ ಮೇಲೆ ಕೊಯಮತ್ತೂರು ಪೊಲೀಸರು ಹಠಾತ್ತನೆ ದಾಳಿಯನ್ನು ದಾಳಿ ನಡೆಸಿದ್ದರು.​ ಈ ದಾಳಿಯ ವೇಳೆಯಲ್ಲಿ ಪೊಲೀಸರು ಲಾಡ್ಜ್ ಒಳಗೆ ಇದ್ದ ಒಂದು ರಹಸ್ಯ ಕೋಣೆಯೊಂದನ್ನು ಪತ್ತೆಹಚ್ಚಿದರು. ಅದಕ್ಕೆ ಕ ಕಿಟಕಿಯಷ್ಟು ಪ್ರವೇಶ ದ್ವಾರವಿದ್ದು ಹಾಗೂ ಅದು ಕಾಣದಂತೆ ಅದಕ್ಕೆ ಕನ್ನಡಿಯನ್ನು ಹೊಂದಿಸಲಾಗಿತ್ತು.



ಕೊನೆಗೂ ಕೂಡ ಆ ರಹಸ್ಯ ಕೋಣೆಯನ್ನು ಪತ್ತೆಹಚ್ಚಿದ ಪೊಲೀಸರು ಅದರೊಳಗೆ ಇದ್ದರೆ 22 ವರ್ಷದ ಯುವತಿ ಹಾಗೂ ಅವಳನ್ನು ಬಂಧಿಸಿಟ್ಟಿದ್ದ ಮಹೇಂದ್ರನ್ ಮತ್ತು ಗಣೇಶನ್ ಎಂಬುವವರನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಆರೋಪಿತ ನಾದ ಮಹೇಂದ್ರನ್ ಕಳೆದ ಮೂರು ವರ್ಷಗಳಿಂದ ಲಾಡ್ಜ್ ವ್ಯವಹಾರವನ್ನು ನಡೆಸುತ್ತಿದ್ದು ಗಣೇಶನ್ ಎಂಬುವವನು ಲಾಡ್ಜ್ನಲ್ಲಿ ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಇವರಿಬ್ಬರೂ ಕೂಡ ವೆಲ್ಲೂರು ಮೂಲದವರು ಎಂದು ತಿಳಿದುಬಂದಿದೆ.