ಇಂಡೋನೇಷ್ಯಾದ ಪ್ರೊಬೊಲಿಂಗೊ ಎಂಬ ಪ್ರದೇಶದಲ್ಲಿ ದಲ್ಲಿ 12ವರ್ಷದ ಕುವರಿ ಒಬ್ಬಳು ಎರಡೆರಡುಬಾರಿ ಮರಣ ಹೊಂದಿದ ವಿಚಿತ್ರ ಘಟನೆಯೊಂದು ನಡೆದಿದೆ.
ಎರಡು ವರ್ಷದ ಬಾಲಕಿ ದೀರ್ಘಕಾಲದ ಮಧುಮೇಹ ರೋಗದಿಂದ ಅಂಗವೈಕಲ್ಯಕ್ಕೆ ಒಳಗಾಗಿದ್ದಳು. ಚಿಕಿತ್ಸೆಗಾಗಿ ಬಾಲಕಿಯನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 18ರ ಸಂಜೆ ಸುಮಾರು ಆರು ಗಂಟೆಗೆ ಬಾಲಕಿಯ ಮರಣಹೊಂದುತ್ತಾಳೆ. ರೆಕಾರ್ಡ್ ಪ್ರಕಾರ ಬಾಲಕಿ ಮರಣ ಹೊಂದಿದ್ದಾರೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ.
ಮರಣ ಹೊಂದಿದ ಬಾಲಕಿಯ ಶವವನ್ನು ಅವರ ಪಾಲಕರು ಮನೆಗೆ ತಂದು ಅಂತಿಮ ಕ್ರಿಯೆಯನ್ನು ನಡೆಸಲು ಅವರ ಸಂಪ್ರದಾಯದಂತೆ ಶವಕ್ಕೆ ಸ್ನಾನ ಮಾಡಲು ಮುಂದಾಗುತ್ತಾರೆ. ನಾನು ಮಾಡಿಸುವ ಸಂದರ್ಭದಲ್ಲಿ ಬಾಲಕಿ ಒಮ್ಮೆಲೇ ಕಣ್ಣು ಬಿಡುತ್ತಾಳೆ. ಇದರಿಂದಾಗಿ ಒಂದು ಕ್ಷಣ ಇಡೀ ಕುಟುಂಬವೇ ಕಂಗಾಲಾಗುತ್ತದೆ. ನೋಡನೋಡುತ್ತಿದ್ದಂತೆಯೇ ಬಾಲಕಿಯ ಕೈಕಾಲು ಚಲಿಸಲು ಆರಂಭಿಸುತ್ತದೆ, ಹೃದಯ ಬಡಿತವು ಕೂಡ ಆರಂಭವಾಗುತ್ತದೆ.
ಬಾಲಕಿಯ ಕಣ್ಣು ಬಿಟ್ಟಿರುವುದನ್ನು ನೋಡಿದ ಪಾಲಕರು ತಕ್ಷಣವೇ ವೈದ್ಯರನ್ನು ಕರೆಸಿ ಮತ್ತೆ ಚಿಕಿತ್ಸೆಗೆ ಒಳಪಡಿಸುತ್ತಾರೆ. ವೈದ್ಯರು ಕೂಡ ಬಾಲಕಿಗೆ ಆಕ್ಸಿಜನ್ ನೀಡುತ್ತಾರೆ. ಆದರೆ ಇಷ್ಟೆಲ್ಲಾ ಆದ ನಂತರ ಸುಮಾರು ಒಂದು ಗಂಟೆ ಆದಮೇಲೆ ಬಾಲಕಿ ಮತ್ತೆ ಮರಣಹೊಂದುತ್ತಾಳೆ.


