Ticker

6/recent/ticker-posts

Header Ads Widget

ಹೊನ್ನಾವರದಲ್ಲಿ ಯುವಕನೊಬ್ಬ ಗೇರುಮರಕ್ಕೆ ನೇಣು ಬಿಗಿದು ಆತ್ಮಹತ್ಯೆ




ಹೊನ್ನಾವರ, ಆಗಸ್ಟ್ 27: ಹೊನ್ನಾವರ ತಾಲೂಕಿನ ಹೋಗುವ ಮುಗ್ವದ ಆರೋಳ್ಳಿ ಎಂಬ ಹಳ್ಳಿಯಲ್ಲಿ ಯುವಕನೊಬ್ಬ ಗೇರುಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬುಧವಾರದಂದು ನಡೆದಿದೆ.



ಮತಪಟ್ಟ ಯುವಕನನ್ನು 24 ವರ್ಷದ ವ್ಯಕ್ತಿ ಅಶೋಕ್ ವಿಠ್ಠಲ್ ನಾಯಕ್ ಎಂದು ಹೇಳಲಾಗಿದೆ. ಈತ ನೈಲಾನ್ ಹಗ್ಗದಿಂದ ಗೇರುಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.




ಬುಧವಾರ ದಿನದಂದು ಬೆಳಿಗ್ಗೆ ಘಟನೆ ನಡೆದಿದ್ದು ಮಾವನ ಮನೆಗೆ ಹೋದ ಸಮಯದಲ್ಲಿ ಗೇರುಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ ಘಟನೆಗೆ ಕಾರಣ ಎಂದು ತಿಳಿದು ಬಂದಿಲ್ಲ. ಹೊನ್ನಾವರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.