ಲಾಕ್ಡೌನ್ ಸಮಯದಲ್ಲಿ ವಿವಿಧ ಬ್ಯಾಂಕುಗಳ ಸಾಲಗಳಿಗೆ ಸುಮಾರು ಐದು ತಿಂಗಳ ತನಕ ವಿನಾಯ್ತಿಯನ್ನು ನೀಡಲಾಗಿತ್ತು. ಆದರೆ ಇದಕ್ಕೆ ಹೆಚ್ಚುವರಿ ಬಡ್ಡಿಯನ್ನು ವಿಧಿಸಲಾಗುತ್ತಿತ್ತು. ಇದೀಗ ಸುಪ್ರೀಂಕೋರ್ಟ್ ಈ ಹೆಚ್ಚುವರಿ ಬಡ್ಡಿಯನ್ನು ಕೇಂದ್ರ ಸರ್ಕಾರವೇ ಭರಿಸಬೇಕು ಎಂದು ಹೇಳಿದೆ.
ಇಡೀ ದೇಶಾದ್ಯಂತ ಲಾಕ್ಡೌನ್ ಹೇರಿರುವುದು ಕೇಂದ್ರಸರ್ಕಾರ. ಆದ್ದರಿಂದ ಈ ಹೆಚ್ಚುವರಿ ಬಡ್ಡಿಯ ಮನ್ನಾದ ಬಗ್ಗೆ ಕೇಂದ್ರ ಸರ್ಕಾರವೇ ಇದರ ನಿರ್ಣಯ ಏನು ಅಂತ ಸೆಪ್ತೆಂಬರ್ 1 ರ ಒಳಗೆ ತಿಳಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಒಂದು ವೇಳೆ ಕೇಂದ್ರ ಸರ್ಕಾರ ತನ್ನ ಸ್ಪಷ್ಟ ನಿಲುವನ್ನು ತಿಳಿಯಪಡಿಸಲು ವಿಫಲವಾದಲ್ಲಿ ಸುಪ್ರೀಂಕೋರ್ಟ್ ತನ್ನ ವಿಶೇಷ ಅಧಿಕಾರವನ್ನು ಬಳಸಿಕೊಂಡು ಇದೊಂದು ಪ್ರಕೃತಿ ವಿಕೋಪದಡಿ ಯಲ್ಲಿ ಬರುವ ಹಾನಿ ಎಂದು ಪರಿಗಣಿಸಲಾಗುವುದು ಎಂದು ಸೂಚನೆಯನ್ನು ನೀಡಿದೆ.


