Ticker

6/recent/ticker-posts

Header Ads Widget

6 ಕೋಟಿ ಮೌಲ್ಯದ ಸುಮಾರು 15 ಸಾವಿರ ಮೊಬೈಲ್ ಗಳಿರುವ ಟ್ರಕ್ ದರೋಡೆಕೋರರಿಂದ ಹೈಜಾಕ್



ಚಿತ್ತೂರು, ಆಗಸ್ಟ್ 29: ಆಂಧ್ರಪ್ರದೇಶದ ಚಿತ್ತೂರಿನ ಹೆದ್ದಾರಿಯಲ್ಲಿ ದರೋಡೆಕೋರರ ಗುಂಪು ಮೊಬೈಲನ್ನು ಸಾಗಿಸುತ್ತಿದ್ದ ಟ್ರಕ್ ಒಂದನ್ನು ಅಡ್ಡಗಟ್ಟಿ ಹೈಜಾಕ್ ಮಾಡಿ ಅದರಲ್ಲಿ ಸುಮಾರು 6 ಕೋಟಿ ಮೌಲ್ಯದ ಮೊಬೈಲ್ ಫೋನುಗಳನ್ನು ದೋಚಿ ಪರಾರಿಯಾಗಿರುವ ಘಟನೆಯೊಂದು ನಡೆದಿದೆ.

ಈ ಘಟನೆಯು ಮಂಗಳವಾರದಂದು ನಡೆದಿದ್ದು ಸುಮಾರು 15 ಸಾವಿರ ಮೊಬೈಲ್ಗಳನ್ನು ತುಂಬಿದ ಟ್ರಕ್  ಚೆನ್ನೈನ ಶ್ರಿಪೆರಂಬದೂರ್​ನಿಂದ ಮಹಾರಾಷ್ಟ್ರಕ್ಕೆ ಪ್ರಯಾಣಿಸುತ್ತಿತ್ತು. ಶ್ರಿಪೆರಂಬದೂರ್​ನಿಂದ ಟ್ರಕ್​ ಅನ್ನು ಬೆನ್ನಟ್ಟಿದ್ದ ದರೋಡೆಕೋರರು ಟ್ರಕ್ ಇನ್ನೇನು ತಮಿಳುನಾಡಿನ ಗಡಿದಾಟಿ ಆಂಧ್ರಪ್ರದೇಶಕ್ಕೆ ಬರುತ್ತಿದ್ದಂತೆಯೇ ದರೋಡೆಕೋರರು ಟ್ರಕ್ಕನ್ನು ನಿಲ್ಲಿಸಿ ಚಾಲಕನಿಗೆ ಚೆನ್ನಾಗಿ ತಿಳಿಸಿ ಪೂರ್ತಿ ಟ್ರಕ್ಕನ್ನು ಹೈಜಾಕ್ ಮಾಡಿದ್ದಾರೆ ಎಂದು ಹೇಳಲಾಗಿದೆ.