ಶಿವಮೊಗ್ಗ: ಜೀವನದಲ್ಲಿ ಜಿಗುಪ್ಸೆಗೊಂಡ 35ರ ಹರೆಯದ ವ್ಯಕ್ತಿಯೊಬ್ಬ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗದ ಬಳಿಬಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ನಡೆದಿದೆ. ಕ್ಷಮಿಸಿ ಇಲ್ಲಿ ಆತ್ಮಹತ್ಯೆಗೆ ಯತ್ನ ನಡೆದಿಲ್ಲ ಬದಲಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ ಯುವಕ ಮನಪರಿವರ್ತನೆ ಮಾಡಿಕೊಂಡಿದ್ದಾನೆ.
ಆ ವ್ಯಕ್ತಿಯ ಹೆಸರು ಚೇತನ್ ಕುಮಾರ್. 35 ವರ್ಷದ ವಯಸ್ಸಿನವನಾಗಿದ್ದು ಕೋವಿಡ್ ಕಾರಣದಿಂದಾಗಿ ಉದ್ಯೋಗವನ್ನು ಕಳೆದುಕೊಂಡಿದ್ದ ಈತ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿ ಇರುತ್ತಿದ್ದರಂತೆ. ಇದರಿಂದಾಗಿ ಮನೆಯವರು ಯಾರು ಕೂಡ ಮಾತನಾಡಿಸದೆ ಇದ್ದಿದ್ದರಿಂದ ಬೇಸರಗೊಂಡ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದ. ಇದೇ ಕಾರಣಕ್ಕೆ ದೂರದ ಬೆಂಗಳೂರಿನಿಂದ ಜೋಗಕ್ಕೆ ಬಂದಿದ್ದ.
ಜೋಗದ ಬಳಿ ರಾಣಿ ಫಾಲ್ಸ್ ಬಳಿ ಕುಳಿತ ಇವನಿಗೆ ಜ್ಞಾನೋದಯ ಆಗಿದೆಯಂತೆ. ತುದಿಯಲ್ಲಿ ಕುಳಿತಿರುವುದನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯುವಕನ ಮನವೊಲಿಸಿ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.


