Ticker

6/recent/ticker-posts

Header Ads Widget

ನೀವು ಓದಲೇಬೇಕಾದ ಕೆಲವೊಂದು ಮನೆಯಲ್ಲಿ ತಯಾರಿಸುವ ಆರೋಗ್ಯ ಮಾಹಿತಿ ಇಲ್ಲಿದೆ ನೋಡಿ



ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ದಿನಾಲು ನಾವು ನೂರಾರು ಗಿಡಮರಗಳನ್ನು ನಾವು ಪ್ರತಿನಿತ್ಯವೂ ಕೂಡ ಕಾಣುತ್ತೇವೆ. ಆದರೆ ಅವುಗಳಲ್ಲಿ ಇರುವಂತ ಔಷಧಿಯ ಗುಣಗಳು ನಮಗೆ ಗೊತ್ತೇ ಆಗುವುದಿಲ್ಲ. ಯಾವ ಯಾವ ಗಿಡಗಳು ಯಾವ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಎನ್ನುವ ಮಾಹಿತಿ ನಮಗೆ ಇರುವುದೇ ಇಲ್ಲ. ಆ ನೂರಾರು ಗಿಡ-ಮರಗಳಲ್ಲಿ ದ ಔಷಧಿ ಗುಣವನ್ನು ಹೊಂದಿರುವಂತಹ ಎಕ್ಕದ ಎಲೆ ಕೂಡ ಒಂದು. ಅದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.



ಹಣ್ಣು ಹಣ್ಣಾಗಿರುವ ಎಕ್ಕದ ಎಲೆಯನ್ನು ಮೊದಲಿಗೆ ಬೆಂಕಿಯಲ್ಲಿ ಬಾಡಿಸಬೇಕು. ಅದರ ನಂತರ ರಸವನ್ನು ಹಿಂಡಿ ತೆಗೆದು ಕೆಲವು ಹನಿಗಳಷ್ಟು ರಸವನ್ನು ಕಿವಿಯೊಳಗೆ ಹಾಕಿಕೊಂಡರೆ ಕಿವಿ ನೋವು ಮತ್ತು ಶ್ರವಣ ಮಾಂದ್ಯತೆಗಳಂತಹ ರೋಗಗಳು ಹೇಳಹೆಸರಿಲ್ಲದೆ ನಿವಾರಣೆಯಾಗುತ್ತದೆ.


ಇನ್ನು ಎರಡನೆಯದಾಗಿ ಕಾಲಿಗೆ ಮುಳ್ಳು ಚುಚ್ಚಿದ ಸಂದರ್ಭದಲ್ಲಿ ಅದು ಹೊರಗಡೆ ಬರದೇ ಇದ್ದಾಗ ಎಕ್ಕದ ಎಲೆಯನ್ನು ಬಳಸಿ ಅದನ್ನು ಹೊರಗಡೆ ತೆಗೆಯಬಹುದು. ಅದು ಹೇಗೆಂದರೆ ಎಕ್ಕದ ಎಲೆಯ ಹಾಲನ್ನು ಮುಳ್ಳು ಚುಚ್ಚಿದ ಜಾಗಕ್ಕೆ ಹಾಕಿದಾಗ ಚುಚ್ಚಿದ ಮುಳ್ಳು ಹೊರಗೆ ಬರುವುದು.



ಮೂರನೆಯದಾಗಿ, ಇನ್ನು ಇನ್ನೊಂದು ಔಷಧಿ ಗುಣವನ್ನು ಹೊಂದಿರುವಂತಹ ಗಿಡಮರ ಸಸ್ಯಗಳಲ್ಲಿ ತುಂಬಾನೇ ಹೆಸರಾದ ನೆಲ್ಲಿಕಾಯಿ. ಈ ನೆಲ್ಲಿಕಾಯಿಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಅದನ್ನು ಪುಡಿಯಾಗಿ ಮಾಡಿ ಪ್ರತಿದಿನವೂ ಕೂಡ ರಾತ್ರಿ ಮಲಗುವ ಮುಂಚೆ ಸೇವಿಸುತ್ತಾ ಹೋದರೆ ನಮ್ಮ ದೃಷ್ಟಿ ಸಾಮರ್ಥ್ಯ ಹೆಚ್ಚಾಗುತ್ತಾ ಹೋಗುತ್ತದೆ.


ನಾಲ್ಕನೆಯದು ದ್ರಾಕ್ಷಿ. ಕೆಲವಷ್ಟು ಮಂದಿಯಲ್ಲಿ ಹಸಿವು ಆಗದೇ ಇರುವಂತಹ ಸಮಸ್ಯೆ ಇರುತ್ತದೆ ಅಂತವರಿಗೆ ಆಗಾಗ ದ್ರಾಕ್ಷಿ ಹಣ್ಣುಗಳನ್ನು ತಿನ್ನುವುದರಿಂದ ಅವರಿಗೆ ಹಸಿವಿನ ಪರಿವೆ ಉಂಟಾಗುತ್ತದೆ. ಅಲ್ಲದೆ ಹೊಟ್ಟೆಯಲ್ಲಿ ಯಾವುದೇ ರೀತಿಯ ತೊಂದರೆ ಇದ್ದರೂ ಕೂಡ ನಿವಾರಣೆಯಾಗುತ್ತದೆ.


ನಾಲ್ಕನೆಯದು ಮಜ್ಜಿಗೆ. ಮಜ್ಜಿಗೆಯನ್ನು ದಿನಾಲೂ ಒಂದು ಲೋಟ ಕುಡಿಯುವುದರಿಂದ ರಕ್ತದೊತ್ತಡದ ಸಮಸ್ಯೆ ಕಡಿಮೆಯಾಗುತ್ತದೆ. ಹಾಗೆ ಯಕೃತ್ತಿನ ತೊಂದರೆಗಳು ಕೂಡ ಕಡಿಮೆಯಾಗುತ್ತದೆ.



ಐದನೆಯದಾಗಿ, ನಿಮಗೇನಾದರೂ ಬಿಕ್ಕಳಿಕೆ ಬರುತ್ತಿದ್ದರೆ ಆಗ ಅರಳಿ ಮರದ ತೊಗಟೆಯನ್ನು ಸುಟ್ಟು ಅದನ್ನು ನೀರಿನಲ್ಲಿ ನೆನೆಸಿ ನೀರನ್ನು ಕುಡಿಯುವುದರಿಂದ ಬಿಕ್ಕಳಿಕೆ ತೊಂದರೆ ನೀಡುತ್ತದೆ.